ಮಡಿಕೇರಿ: ಚೆರಂಬಾಣೆಯಲ್ಲಿ ಗೌಡ ಸಮಾಜದ ಕೈಲ್ ಮೂಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಶಾಸಕ ಎ ಎಸ್ ಪೊನ್ನಣ್ಣ
ಗೌಡ ಸಮಾಜ ಚೇರಂಬಾಣೆ (ರಿ) ಹಾಗೂ ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಇವರ ಸಹಯೋಗದಲ್ಲಿ ನಡೆಯುತ್ತಿರುವ ಕೈಲ್ ಮುಹೂರ್ತ ಸಂತೋಷಕೂಟ ಜಂಬರ 2025 ಕಾರ್ಯಕ್ರಮದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು* ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಭಾಗವಹಿಸಿದರು. ಕಾರುಗುಂದದಲ್ಲಿರುವ ಚೇರಂಬಾಣೆ ಗೌಡ ಸಮಾಜ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಗೌಡ ಸಮಾಜದವರ ಸನ್ಮಾನ್ಯ ಸ್ವೀಕರಿಸಿ ಮಾತನಾಡಿದ ಮಾನ್ಯ ಶಾಸಕರು, ಅರೆಭಾಷಿಕರು ಈ ಭಾಗದಲ್ಲಿ ಹೆಚ್ಚಿನ ಮುತುವರ್ಜಿಯಿಂದ ತಮ್ಮ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವಲ್ಲಿ ಗಮನಹರಿಸುವಂತಾಗಬೇಕು. ಇಂತಹ ಕಾರ್ಯಕ್ರಮಗಳು ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಲು ಸಹಾಯಕವಾಗಲಿದೆ. ಸಮಾಜದ ಬಾಂಧವ