ಚಿಟಗುಪ್ಪ: ಮೀನಕೇರಾದಲ್ಲಿ ಗವಿ ವೀರಭದ್ರೇಶ್ವರ ಜಾತ್ರೆ ಹಿನ್ನಲೆಯಲ್ಲಿ ಶ್ರದ್ಧಾಭಕ್ತಿಯ ರಥೋತ್ಸವ
ತಾಲೂಕಿನ ಇತಿಹಾಸ ಪ್ರಸಿದ್ಧ ಮೀನಕೇರಾ ಗ್ರಾಮದ ಗವಿ ವೀರಭದ್ರೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ 11:51ಕ್ಕೆ ಅಪಾರ ಭಕ್ತ ಸಮುದಾಯ ಮಧ್ಯ ರಥೋತ್ಸವ ನಡೆಯಿತು. ಈ ವೇಳೆ ಪೂಜ್ಯರು, ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು, ಗಣ್ಯರು, ವಿವಿಧೆಡೆಯಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳು, ಜಾತ್ರಾ ಉತ್ಸವ ಸಮಿತಿ ಸಮಸ್ತ ಪದಾಧಿಕಾರಿಗಳು ರಥೋತ್ಸವಕ್ಕೆ ಸಾಕ್ಷಿಯದರು.