ಬಳ್ಳಾರಿ: ನಗರದ ಮೋತಿ ಫ್ಲೈಓವರ್ ಬಳಿ ಬೈಕ್ ಅಪಘಾತ, ಟ್ರಾಫಿಕ್ ಜಾಮ್
ಅ.19,ಭಾನುವಾರ ರಾತ್ರಿ 8ಗಂಟೆ ಸುಮಾರಿಗೆ ಬಳ್ಳಾರಿ ನಗರದ ಮೋತಿ ಫ್ಲೈಓವರ್ ಬಳಿ ಸ್ಕೂಟಿಯೊಂದು ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ನಗರದ ಮೋತಿ ಫ್ಲೈಓವರ್ ಮೇಲಿನ ರಸ್ತೆ ಅಪಘಾತದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಧಾವಿಸಿ ವಾಹನ ಸಂಚಾರವನ್ನು ಸರಾಗಗೊಳಿಸಲು ಕ್ರಮ ಕೈಗೊಂಡಿದ್ದಾರೆ.