ಕಲಬುರಗಿ : ಉಪವಾಸ ಕುಳಿತು ಹೋರಾಟ ಮಾಡಬೇಡಿ.. ನಾಲ್ಕು ಹೋತ್ತು ಊಟ ಮಾಡಿ ಹೋರಾಟ ಮಾಡಿ ಅಂತಾ ಪ್ರತಿಭಟನನಿರತ ರೈತರಿಗೆ ಮಾಶ್ಯಾಳ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದ್ದಾರೆ.. ಆಳಂದ ತಾಲೂಕಿನಲ್ಲಿ ಪವನ ವಿದ್ಯುತ್ ಘಟಕ ಸ್ಥಾಪನೆ ವಿರೋಧಿಸಿ ಡಿ19 ರಂದು ಮಧ್ಯಾನ 3 ಗಂಟೆಗೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರೈತರು ಕಷ್ಟಪಟ್ಟು ದುಡಿದು ಎಲ್ಲರಿಗೆ ಊಟ ಹಾಕ್ತಾರೆ.. ಅದೇ ರೈತ ಕೇವಲ ತನಗಾಗಿ ದುಡಿದ್ರೆ ನಾವೆಲ್ಲರೂ ಬೇರೆನೆ ತಿನ್ನಬೇಕಾಗುತ್ತದೆಂದು ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ