ಬಂಗಾರಪೇಟೆ: ತಾಲೂಕಿನ ನಲ್ಲೂರಿನಲ್ಲಿ
ಚಿಕನ್ ಬಿರಿಯಾನಿಗೆ ಮುಗ್ಗಿಬಿದ್ದ ಜನರು
ಮಳೆ ಬೀಳುತ್ತಿದ್ದರು ಬಿರಿಯಾನಿಗಾಗಿ ನೂಕುನುಗ್ಗಲು ಮಾಡಿದ ಘಟನೆ,ಬುಧವಾರ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆಯಿತು. ಪಾಲರ್ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ,ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾರ್ಯಕ್ರಮ. ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿರುವವರಿಗೆ ಭರ್ಜರಿ ಬಿರಿಯಾನಿ ವ್ಯವಸ್ಥೆ.ವೇದಿಕೆ ಕಾರ್ಯಕ್ರಮ ಮುಗಿಯುತ್ತಿದಂತೆ ಚಿಕನ್ ಬಿರಿಯಾನಿಗಾಗಿ ಕಿತ್ತಾಟ.ಮಳೆಯನ್ನು ಲೆಕ್ಕಿಸದೆ ಬಿರಿಯಾನಿಗಾಗಿ ನೂಕುನುಗ್ಗಲು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು