ಚಾಮರಾಜನಗರ: ಬಾಚನಹಳ್ಳಿ ಬಸ್ ಗಳ ಅಪಘಾತ ಕೇಸ್- ಚಾಮರಾಜನಗರ ಜಿಲ್ಲೆಯ 21 ಮಂದಿಗೆ ಗಾಯ
ಮಳವಳ್ಳಿ ತಾಲ್ಲೂಕಿನ ಬಾಚನಳ್ಳಿ ಹತ್ತಿರ ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, 84 ಜನರಿಗೆ ಗಾಯಗಳಾಗಿವೆ ಇದರಲ್ಲಿ 21 ಮಂದಿ ಚಾಮರಾಜನಗರ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಗಂಭೀರ ಗಾಯಾಳುಗಳಲ್ಲಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆ ಹಾಗೂ ಚಾಮರಾಜನಗರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಜಿಲ್ಲಾಡಳಿತದಿಂದ ಅಗತ್ಯ ಎಲ್ಲಾ ನೆರವು ಹಾಗೂ ವೈದ್ಯಕೀಯ ಸಹಾಯವನ್ನು ಒದಗಿಸಲಾಗುವುದು ಎಂದು ಡಿಸಿ ಶಿಲ್ಪಾನಾಗ್ ತಿಳಿಸಿದ್ದು ಮಂಡ್ಯ ಆಸ್ಪತ್ರೆಗೂ ಡಿಸಿ ಶಿಲ್ಪಾನಾಗ್, ಕೊಳ್ಳೇಗಾಲ ತಹಸಿಲ್ದಾರ್ ಬಸವರಾಜು ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.