ಶಿವಮೊಗ್ಗ: ಸೋಪ್ಪುಗುಡ್ಡೆಯಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಜನತಾದರ್ಶನ ನಡೆಸಿದ ಶಾಸಕ ಆರಗ ಜ್ಞಾನೇಂದ್ರ
ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ ಅವರು ಭಾನುವಾರ ನಮ್ಮ ಸೊಪ್ಪು ಗುಡ್ಡೆಯಲ್ಲಿರುವ ಗೃಹ ಕಚೇರಿಯಲ್ಲಿ ಜನತಾದರ್ಶನವನ್ನು ನಡೆಸಿದರು ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಶಾಸಕರಿಗೆ ನೀಡಿದ್ದಾರೆ.ಸ್ಥಳೀಯ ಸಮಸ್ಯೆಗಳು ಅಭಿವೃದ್ಧಿ ಕಾಮಗಾರಿ ಕುರಿತಂತೆ ಶಾಸಕರಿಗೆ ಸಾರ್ವಜನಿಕರು ಮನವಿಯನ್ನ ಸಲ್ಲಿಸಿದರು. ಈ ಕುರಿತಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಸೂಚನೆಯನ್ನು ನೀಡಿದರು.