ಸಿರಗುಪ್ಪ: ಮೇಲಧಿಕಾರಿಗಳ ಕಿರುಕುಳ ಆರೋಪ, ವಿಷ ಸೇವಿಸಿದ ಪೌರಕಾರ್ಮಿಕ
ಮೇಲಧಿಕಾರಿ ಕಿರುಕುಳದಿಂದ ಬೇಸತ್ತು ಮುರಳೇಶ ಎಂಬ ಪೌರ ಕಾರ್ಮಿಕ ವಿಷ ಕುಡಿದ ಘಟನೆ ಗುರುವಾರ ಮಧ್ಯಾಹ್ನ 4ಗಂಟೆಗೆ ನಡೆದಿದೆ. 'ನಿತ್ಯ ಕೆಲಸಕ್ಕೆ ಹಾಜರಾದರೂ ಸರಿಯಾಗಿ ಹಾಜರಾತಿ ನೀಡಲ್ಲ. ಪ್ರತಿ ತಿಂಗಳು ಸಂಬಳ ಕೇಳಿದರೂ ಕಿರಿಕಿರಿ ಮಾಡುತ್ತಾರೆಂದು ನೊಂದು ವಿಷ ಕುಡುದಿದ್ದಾರೆ' ಎಂದು ಮುರಳೇಶ ಪತ್ನಿ ಆರೋಪಿಸಿದರು. ಕುಟುಂಬದ ಸಹಾಯದಿಂದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ನಗರಸಭೆ ಪೌರಾಯುಕ್ತರು ಭೇಟಿ ನೀಡಿ ವರದಿ ಪಡೆದಿದ್ದಾರೆ. ಈ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆಸ್ಪತ್ರೆಗೆ ಭೇಟಿ ನೀಡಿ, ಅವರನ್ನು ವಿಚಾರಿಸಲಾಯಿತು. ಗುಣಮುಖರಾದ ನಂತರ ವಿಚಾರಣೆ ನಡೆಸಿ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಪೌರಾಯುಕ್ತ ಗಂಗಾ