ಕಲಬುರಗಿ: ನ್ಯಾಯಾಂಗ ನಿಂದನೆಯಡಿ ಜ್ಞಾನಪ್ರಕಾಶ್ ಸ್ವಾಮಿ ಬಂಧನಕ್ಕೆ ನಗರದಲ್ಲಿ ಕಲಬುರಗಿ ಹೈಕೋರ್ಟ್ ವಕೀಲರ ಸಂಘ ಆಗ್ರಹ
ಕಲಬುರಗಿ : ಆರ್ಎಸ್ಎಸ್ ಪಥಸಂಚಲನ ಜಟಾಪಟಿಗೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ ನ್ಯಾಯಧೀಶರ ವಿರುದ್ಧ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವಹೇಳನಕಾರಿ ಹೇಳಿಕೆಗೆ ಕಲಬುರಗಿ ಹೈಕೋರ್ಟ್ ವಕೀಲರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.. ಈ ಬಗ್ಗೆ ಅಕ್ಟೋಬರ್ 30 ರಂದು ಮಧ್ಯಾನ 2 ಗಂಟಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗೌರಿಶ್ ಕಾಶೆಂಪುರ್, ನ್ಯಾಯಧೀಶರನ್ನ ರಾಜಕೀಯ ಪಕ್ಷಕ್ಕೆ ಹೋಲಿಸಿ ಮಾತನಾಡಿದ್ದು ಖಂಡನೀಯವಾಗಿದ್ದು, ತಕ್ಷಣವೇ ಸ್ವಾಮೀಜಿಯನ್ನ ಕ್ರಿಮಿನಲ್ ನ್ಯಾಯಾಂಗ ನಿಂದನೆಯಡಿ ಬಂಧಿಸಲು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗುತ್ತೆಂದು ಹೇಳಿದರು.