ಮಂಗಳೂರು: ಕಾರ್ನಾಡ್ ಬಳಿ ಗಾಂಜಾ ಮಾರಾಟಕ್ಕೆ ಯತ್ನ ಆರೋಪ: ಯುವಕ ಅರೆಸ್ಟ್
ಇಂದು ದಿನಾಂಕ 20/09/25 ರಂದು ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಯತಿರಾಜ್ (27 ವರ್ಷ ತಂದೆ ಲೇಟ್ ಲಕ್ಷ್ಮಣ) ಎಂಬವನು ಮುಲ್ಕಿ ಕಾರ್ನಾಡ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವನನ್ನು ಮುಲ್ಕಿ ಪೊಲೀಸರು ಬಂಧಿಸಿ ಆತನಿಂದ 1ಕೆಜಿ200ಗ್ರಾಂ ಗಾಂಜಾ, ಒಂದು ಆಟೋ ರಿಕ್ಷಾವನ್ನು ಗಾಂಜಾ ಮಾರಾಟದಿಂದ ಬಂದ ರೂಪಾಯಿ 300 ವನ್ನು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿ ಆರೋಪಿ ಯತಿರಾಜ್ ರವರನ್ನು ಮಾನ್ಯ ನ್ಯಾಯಲಕ್ಕೆ ಹಾಜರು ಪಡಿಸಲಾಗಿದೆ ಮಾನ್ಯ ನ್ಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.