ಕಂಪ್ಲಿ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೆ. ರಾಧ ರವರ ಅವಿರೋಧ ಆಯ್ಕೆ
Kampli, Ballari | Oct 20, 2025 ಅ.20,ಸೋಮವಾರ ಸಂಜೆ 5ಗಂಟೆಗೆ ಕಂಪ್ಲಿ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಚುನಾವಣೆಯಲ್ಲಿ ಕೆ. ರಾಧ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ರಾಧ ರವರಿಗೆ ಪಟ್ಟಣದ ರೈತ ಮುಖಂಡರು ಹಾಗೂ ಸಹಕಾರ ಸಂಘದ ಸದಸ್ಯರು ಸನ್ಮಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು — ಕೆ. ರಾಧ ರವರ ಸೇವಾಭಾವನೆ ಹಾಗೂ ರೈತರ ಹಿತಕ್ಕಾಗಿ ನೀಡಿದ ಕೊಡುಗೆಯನ್ನು ಪ್ರಶಂಸಿಸಿದರು. ರಾಧ ರವರು ತಮಗೆ ನೀಡಿದ ಬೆಂಬಲಕ್ಕೆ ಧನ್ಯವಾದ ವ್ಯಕ್ತಪಡಿಸಿ, ರೈತರ ಹಿತಾಸಕ್ತಿ ಕಾಪಾಡಲು ಬದ್ಧರಾಗಿರುವುದಾಗಿ ಹೇಳಿದರು.