ಮೊಳಕಾಲ್ಮುರು: ಬಿಜಿಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಂದ ಮತ್ತೊಂದು ಲಾರಿ ಡಿಕ್ಕಿ, ಭೀಕರ ಅಪಘಾತದಲ್ಲಿ ಇಬ್ಬರ ಸಾವು
ತಾಲೂಕಿನ 150 ಎ ರಾಷ್ಟ್ರೀಯ ಹೆದ್ದಾರಿ ಬಿ.ಜಿ.ಕೆರೆ ಎಚ್ ಪಿ ಪೆಟ್ರೋಲ್ ಬಂಕ್ ಸಮೀಪದಲ್ಲಿ ಮಂಗಳವಾರ ಬೆಳಿಗ್ಗೆ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗಳನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಅರ್ಜುನ ಚಿನ್ನೇನಹಳ್ಳಿಯ ಡಿ.ಕರಿಬಸಪ್ಪ(23), ದಾವಣಗೆರೆ ನಗರದ ಎಪಿಎಂಸಿಯ ಅನನ್ಯ ಪಾರ್ಸಲ್ ಸರ್ವಿಸಸ್ ಅಂಗಡಿಯ ಎ.ಡಿ.ಕುಮಾರಗೌಡ(45) ಎಂದು ಗುರುತಿಸಲಾಗಿದೆ. ಚಳ್ಳಕೆರೆ ಕಡೆಗೆ ಮುಖ ಮಾಡಿ ತಾಂತ್ರಿಕ ದೋಷದಿಂದ ಹೆದ್ದಾರಿ ಮಧ್ಯ ಭಾಗದಲ್ಲಿಯೇ ನಿಂತಿದ್ದ ಭತ್ತ ತುಂಬಿದ್ದ ಲಾರಿಯ ಡಿಕ್ಕಿಯಾಗಿದೆ.