ಬೀಳಗಿ: ಕೊರ್ತಿ ಸಮುದಾಯಭವನದಲ್ಲಿ ಶ್ರದ್ದಾಭಕ್ತಿಗಳಿಂದ ಜರುಗಿದ ಸನಾದಿ ಅಪ್ಪಣ್ಣನವರ 150ನೇ ಜಯಂತಿ ಕಾರ್ಯಕ್ರಮ
Bilgi, Bagalkot | Oct 11, 2025 ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣನವರ 150 ನೇ ಜಯಂತಿ ಕಾರ್ಯಕ್ರಮವನ್ನ ಆಚರಣೆ ಮಾಡಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಸನಾದಿ ಅಪ್ಪಣ್ಣ ಕಲಾಕಾರರ ಸಂಘದ ಅಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೀಳಗಿ ತಾಲೂಕಿನ ಕೊರ್ತಿ ಸಮುದಾಯಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನಾದಿ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಹಾಗೂ ಗಣ್ಯರು ಗೌರವ ಸಮರ್ಪಿಸಿದರು.