ಹುಮ್ನಾಬಾದ್: ಪೊಲೀಸರು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡ್ತಿದ್ದಾರೆ : ನಗರದಲ್ಲಿ ಶಾಸಕ ಡಾ.ಸಿದ್ದು ಪಾಟೀಲ ಗಂಭೀರ ಆರೋಪ
Homnabad, Bidar | Nov 12, 2025 ಪ್ರತಿಭಟನೆ ನಡೆಸುವುದು ಸಂವಿಧಾನ ಬದ್ಧ ಹಕ್ಕು ರೈತರು ನಾವು ಪ್ರತಿಭಟನೆ ನಡೆಸುತ್ತಿದ್ದರೆ ಅವರಿಗೆ ಸಹಿಸುವುದಕ್ಕೆ ಆಗ್ತಾ ಇಲ್ಲ ಅದಕ್ಕೆ ಅವರು ಸರ್ಕಾರದ ಹಾಗೂ ಕಾಂಗ್ರೆಸ್ ಮುಖಂಡರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಅಂತ ಶಾಸಕ ಡಾ. ಸಿದ್ದು ಪಾಟೀಲ್ ಅವರು ಗಂಭೀರ ಆರೋಪ ಮಾಡಿದರು. ನಗರದಲ್ಲಿ ಕಬ್ಬು ಬೆಳೆಗಾರರು ಬುಧವಾರ ಹಮ್ಮಿಕೊಂಡ ಪ್ರತಿಭಟನೆ ವೇಳೆ ಮಧ್ಯಾಹ್ನ 2:45 ಕ್ಕೆ ಮಾಧ್ಯಮದವರಿಗೆ ತಿಳಿಸಿದರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ್ ಪಾಟೀಲ, ಮಂಡಲ ಅಧ್ಯಕ್ಷ ಅನಿಲ ಪಸಾರ್ಗಿ, ಮಲ್ಲಿಕಾರ್ಜುನ ಸಿಗಿ ಸೇರಿದಂತೆ ಪಕ್ಷದ ಅನೇಕ ಜನ ಮುಖಂಡರು ಹಾಜರಿದ್ದರು