ರಾಯಚೂರು: ರಾಯಚೂರು : ತುಂಗಭದ್ರ ಡ್ಯಾಂ ಎಲ್ಲಾ ಗೇಟ್ ಬದಲಾಯಿಸಲು ಆದೇಶ ನೀಡಿದ್ದೇವೆ
ತುಂಗಭದ್ರಾ ಗೇಟ್ ಮುರಿದಾಗ ಹಗಲು ರಾತ್ರಿ ಕೆಲಸ ಮಾಡಿ ಬದಲಾಯಿಸಿದೆವು ಎಂದು ಗಾಣದಾಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪದಗ್ರಹಣ ಸಭೆಯಲ್ಲಿ ಡಿ ಕೆ ಶಿವಕುಮಾರ್ ಗಾಣದಾಳದಲ್ಲಿ ಹೇಳಿದರು. ಅಷ್ಟೇ ಅಲ್ಲದೇ ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಮಾಡಿದ್ದು. ಪಾಪಾ ರೈತರಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಪಿಂಚಣಿ ಇಲ್ಲ, ಲಂಚ ಇಲ್ಲ, ರಿಟೈರ್ ಮೆಂಟ್ ಇಲ್ಲ, ಸಹಾಯ ಮಾಡಬೇಕು ಅಂತ ಹಗಲು ರಾತ್ರಿ ಕೆಲಸ ಮಾಡಿ ಬದಲಾಯಿಸಿದೆವು, ಇದೀಗ ಎಲ್ಲಾ ಗೇಟ್ ಗಳನ್ನೂ ಬದಲಾಯಿಸಲು ಮುಂದಾಗಿದ್ದೆವೆ ಎಂದರು.