ಸೂಪಾ: ಗಣೇಶಗುಡಿಯಲ್ಲಿ ಲಾಂಗ್ ರಾಪ್ಟಿಂಗಿಗೆ ಅಧಿಕೃತ ಚಾಲನೆ
ಜೋಯಿಡಾ : ಜೋಯಿಡಾ ಮತ್ತು ದಾಂಡೇಲಿಯ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿರುವ ಲಾಂಗ್ ರಾಪ್ಟಿಂಗಿಗೆ ಜೋಯಿಡಾ ತಾಲೂಕಿನ ಗಣೇಶ ಗುಡಿಯಲ್ಲಿ ಭಾನುವಾರ ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು. ಗಣೇಶಗುಡಿಯಿಂದ ಮೌಳಂಗಿವರೆಗೆ ಸರಿ ಸುಮಾರು 11ರಿಂದ 12 ಕಿಲೋಮೀಟರ್ ವರೆಗೆ ಕಾಳಿ ನದಿಯಲ್ಲಿ ನಡೆಯಲಿರುವ ಈ ರಾಪ್ಟಿಂಗ್ ಪ್ರವಾಸಿಗರ ಅತ್ಯಂತ ಆಕರ್ಷಣೀಯವಾದ ಜಲಸಾಹಸ ಕ್ರೀಡೆಯಾಗಿದೆ. ಈ ಭಾಗದ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಬಹುಮೂಲ್ಯ ಕೊಡುಗೆಯನ್ನು ರಾಪ್ಟಿಂಗ್ ನೀಡುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.