ಬೆಂಗಳೂರು ಉತ್ತರ: ಬೆಂಗಳೂರು ನಗರ ಸುತ್ತಾಟದಲ್ಲಿ ಕಟ್ಟುನಿಟ್ಟಿನ ಸೂಚನೆಗಳ ಮಳೆಗರೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಗರ ಸುತ್ತಾಟ ವಿಂಡ್ಸರ್ ಮ್ಯಾನರ್ ಸರ್ಕಲ್ನಿಂದ ಪ್ರಾರಂಭವಾಯಿತು. ಒಳಚರಂಡಿ ಸಮಸ್ಯೆಯಿಂದ ನೀರು ನಿಂತಿರುವುದನ್ನು ಅಧಿಕಾರಿಗಳು ತಿಳಿಸಿದರು. ಜಿ.ಬಿ.ಎಗೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲು ಹಾಗೂ ಸರ್ಕಲ್ನ ಮತ್ತೊಂದು ಬದಿಯ ಬಾಕಿ ರಸ್ತೆ ಕಾಮಗಾರಿ ಇಂದು ರಾತ್ರಿ ಒಳಗಾಗಲೇ ಪೂರ್ಣಗೊಳಿಸಲು ಆದೇಶಿಸಿದರು. ರಿಂಗ್ರೋಡ್ನಲ್ಲಿ ಹಳೆಯ ನಿರ್ಮಾಣ ಅವಶೇಷಗಳನ್ನು ಎಸೆಯಲಾಗಿರುವುದನ್ನು ಗಮನಿಸಿದ ಸಿಎಂ, ತಮ್ಮ ಕಾರು ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ವಾಹನಗಳನ್ನು ಜಪ್ತಿ ಮಾಡಲು ಸೂಚಿಸಿದರು.