ಕಮಲನಗರ: ಮುಖ್ಯಮಂತ್ರಿಗಳು ಬೀದರ್ ಜಿಲ್ಲೆಯನ್ನು ಅತಿವೃಷ್ಟಿ ಜಿಲ್ಲೆ ಎಂದು ಘೋಷಿಸಬೇಕು : ಪಟ್ಟಣದಲ್ಲಿ ಶಾಸಕ ಪ್ರಭು ಚೌಹಾಣ್
ಅತಿವೃಷ್ಟಿಯಿಂದ ಔರಾದ್ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ ಇಡೀ ಜಿಲ್ಲೆಯ ರೈತರು ಬೆಳೆದ ಸಂಪೂರ್ಣ ಬೆಳೆಗಳು ಹಾನಿಗೀ ದಾಗಿದ್ದು ಜಿಲ್ಲೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿವೃಷ್ಟಿ ಜಿಲ್ಲೆ ಎಂದು ಘೋಷಿಸಬೇಕು ಮತ್ತು ರೈತರ ಪ್ರತಿ ಎಕ ರಿಗೆ ₹25ಸಾವಿರ ಪರಿಹಾರ ಘೋಷಿಸಬೇಕು ಎಂದು ಶಾಸಕ ಪ್ರಭು ಚೌಹಾಣ್ ಅವರು ಆಗ್ರಹಿಸಿದರು. ಕಮಲ್ ನಗರದಲ್ಲಿ ಸೋಮವಾರ ಬೆಳಿಗ್ಗೆ 10:30ಕ್ಕೆ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಿಸಿ ಮಾತನಾಡಿದರು.