ಕಲಬುರಗಿ : ಪರ್ಯಾಯ ರಾಜಕಾರಣಕ್ಕಾಗಿ ಡಿಸೆಂಬರ್ 21 ರಂದು ಸಿಪಿಐಂ ಪಕ್ಷದಿಂದ ಬೆಂಗಳೂರಿನಲ್ಲಿ ಜನದನಿ ರ್ಯಾಲಿ ಮೂಲಕ ಮನೆ ಮನೆ ಭೇಟಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದ್ದಾರೆ.. ಡಿಸೆಂಬರ್ 16 ರಂದು ಮಧ್ಯಾನ 12 ಕ್ಕೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಇನ್ನೂ ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಿಂದ 2500 ಕ್ಕೂ ಅಧಿಕ ಜನ ಭಾಗಿಯಾಗಲಿದ್ದಾರೆಂದು ಕೆ ನೀಲಾ ಹೇಳಿದ್ದಾರೆ