ಚಿಕ್ಕೋಡಿ: ಕೇರೂರ ಗ್ರಾಮದಲ್ಲಿ ನಮ್ಮ ಭೂಮಿ ನಮ್ಮ ತೋಟ ಯೋಜನೆ ಜಾಗಕ್ಕಾಗಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಪ್ರತಿಭಟನೆ
ಕೇರೂರ ಗ್ರಾಮದಲ್ಲಿ ನಮ್ಮ ಭೂಮಿ ನಮ್ಮ ತೋಟ ಯೋಜನೆ ಜಾಗಕ್ಕಾಗಿ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದರು. ಕಳೆದ 19 ವರ್ಷಗಳ ಹಿಂದೆ ಸುಮಾರು 184 ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ನೀಡಿಲಾಗಿತ್ತು. ಆದ್ರೆ ಇನ್ನೂವರೆಗೆ ಜಾಗ ನೀಡಿಲ್ಲ,ಜಾಗ ನೀಡುವಂತೆ ಕರ್ನಾಟಕ ಭೀಮ ರಕ್ಷಕ ಸಂಘಟನೆ ವತಿಯಿಂದ ಗುರುವಾರ ಕೇರೂರ ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ನಡೆಸಿದರು. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಚಿಕ್ಕೋಡಿ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೆ. ಎ. ವಣ್ಣೂರ ಆಗಮಿಸಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಗಾರರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡರು.