ಗದಗ: ಬ್ರಾಹ್ಮಣ ಮುಸ್ಲಿಂ, ಬ್ರಾಹ್ಮಣ ಕ್ರಿಶ್ಚಿಯನ್ ಅಂತ ನಮ್ಮ ಸಮುದಾಯದಲ್ಲಿ ಇಲ್ಲ: ನಗರದಲ್ಲಿ ಬ್ರಾಹ್ಮಣ ಮುಖಂಡ ದತ್ತಣ್ಣ ಜೋಶಿ
Gadag, Gadag | Sep 15, 2025 ಬ್ರಾಹ್ಮಣ ಸಮುದಾಯದಲ್ಲಿ ಬ್ರಾಹ್ಮಣ ಮುಸ್ಲಿಂ ಮತ್ತು ಬ್ರಾಹ್ಮಣ ಕ್ರಿಶ್ಚಿಯನ್ ಅಂತ ನಾಗಮೋಹನ ದಾಸ್ ಆಯೋಗದ ವರದಿಯಲ್ಲಿ ಸೇರಿಸಲಾಗಿದೆ. ಆದರೆ, ನಮ್ಮ ಸಮುದಾಯದಲ್ಲಿ ಇದು ಇಲ್ಲ. ಕೂಡಲೇ ರಾಜ್ಯ ಸರ್ಕಾರ ಇವೆರಡೂ ಪದಗಳನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವ ಚಿಂತನೆ ಮಾಡುತ್ತೇವೆ ಅಂತ ಬ್ರಾಹ್ಮಣ ಸಮುದಾಯದ ಮುಖಂಡ ದತ್ತಣ್ಣ ಜೋಶಿ ಹೇಳಿದರು.