ಹಾವೇರಿ: ನಗರದ ಸರ್ಜಿ ರೇಣುಕಾ ದೇವಧರ್ ಆಸ್ಪತ್ರೆಯಲ್ಲಿ ಕ್ಷಯ ರೋಗಿಗಳ ದತ್ತು ಪಡೆದು ಪೌಷ್ಟಿಕ ಆಹಾರದ ಕಿಟ್ ಗಳ ವಿತರಣೆ
Haveri, Haveri | Sep 16, 2025 ನಗರದ ಸರ್ಜಿ ರೇಣುಕಾ ದೇವಧರ್ ಆಸ್ಪತ್ರೆಯಲ್ಲಿ 22 ಕ್ಷಯ ರೋಗಿಗಳನ್ನು ದತ್ತು ಪಡೆದುಕೊಂಡು ಪೌಷ್ಟಿಕ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಡಾ. ಮಧು ಕೆ.ಆರ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 1,676 ಜನರು ಒಳಗಾಗಿದ್ದರು. ಈ ವರ್ಷ 1,077 ಜನರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. 15 ದಿನಗಳ ನಿರಂತರ ಕೆಮ್ಮು, ಕಫ, ಸಂಜೆಯಾದರೆ ಜ್ವರ, ಊಟ ಸೇರದಿರುವುದು, ಕಫದಲ್ಲಿ ರಕ್ತ ಬೀಳುವುದು, ತೂಕ ಕಡಿಮೆಯಾಗುವುದು ಹೀಗೆ ಲಕ್ಷಣಗಳಾಗಿವೆ. ಅಂತಹವರು ಬೇಗನೇ ಬಂದು ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳಬೇಕು. ನಮ್ಮ ಆಸ್ಪತ್ರೆಯಲ್ಲೇ 40ಜನರು ಕ್ಷಯ ರೊಗಕ್ಕೆ ಒಳಗಾಗಿದ್ದಾರೆ. ಅಂತಹವರ ಪೈಕಿ 22ಜನರನ್ನು ದತ್ತು ಪಡೆದಿದ್ದೇವೆ.ಸರಕಾರದಿಂದ ತಲಾ 1000 ರೂ. ರೋಗಿಗಳಿಗೆ ಸಿಗುತ್ತದೆ ಎಂದರು.