ರಾಮದುರ್ಗ: ಸೆ. 22 ರಿಂದ ನಾಡಹಬ್ಬ ಆಚರಣೆ: ನಾಡಹಬ್ಬದ ಪ್ರಧಾನ ಕಾರ್ಯದರ್ಶಿ ಡಾ. ಸಿ. ಕೆ. ಜೋರಾಪೂರ
ಸೆ. 22 ರಿಂದ ನಾಡಹಬ್ಬ ಆಚರಣೆ ಎಂದು ನಾಡಹಬ್ಬದ ಪ್ರಧಾನ ಕಾರ್ಯದರ್ಶಿ ಡಾ. ಸಿ. ಕೆ. ಜೋರಾಪೂರ ಹೇಳಿದರು. ಬೆಳಗಾವಿಯಲ್ಲಿ ನಡೆಸುವ ನಾಡಹಬ್ಬಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರಚಲಿತ ವಿಷಯವನ್ನು ಮುಂದಿಟ್ಟುಕೊಂಡು ಚಿಂತನೆ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು ಶುಕ್ರವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಪ್ರತಿ ವರ್ಷದಂತೆ ಈ ವರ್ಷವೂ 98ನೇ ನಾಡ ಹಬ್ಬ ಉತ್ಸವವನ್ನು ಸೆ. 22ರಿಂದ ಸೆ. 26ರವರೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು