ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದರಾಮೇಶ್ವರ ಬ್ರಹ್ಮರಥೋತ್ಸವ ಸಂಪನ್ನ
ಶ್ರೀ ಸಿದ್ದರಾಮೇಶ್ವರ ಸ್ವಾಮಿ ರಥೋತ್ಸವ ಸಂಪನ್ನ. ತ್ಯಾಮಗೊಂಡ್ಲು ಹೋಬಳಿಯ ಐತಿಹಾಸಿಕ ಮಹತ್ವ ಹೊಂದಿರುವ ಸುಕ್ಷೇತ್ರ ಚಿಕ್ಕನಹಳ್ಳಿ ಗ್ರಾಮದ ಶ್ರೀ ಸಿದ್ದರಾಮೇಶ್ವರಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸೋಮವಾರ ಮಧ್ಯಾಹ್ನ ೨:೪೫ಕ್ಕೆ ವಿಜೃಂಭಣೆಯಿAದ ನೆರವೇರಿತು. ಐತಿಹ್ಯ: ಗ್ರಾಮೀಣ ಭಾಗದಲ್ಲಿನ ಜನರ ಅನುಕೂಲಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿದ ಸಿದ್ದರಾಮೇಶ್ವರ ಹೋಬಳಿಯ ಹಸಿರುವಳ್ಳಿ ಹಾಗೂ ಚಿಕ್ಕನಹಳ್ಳಿ ಗ್ರಾಮದಲ್ಲಿ ಕೆಲಕಾಲ ಉಳಿದುಕೊಂಡು ಸುತ್ತಮುತಿನ ಗ್ರಾಮಗಳಲ್ಲಿ ಕೆರೆಕಟ್ಟೆಗಳನ್ನು ಕಟ್ಟಿಸುವ ಕಾರ‍್ಯದಲ್ಲಿ ತೊಡಗಿದ್ದರು.