ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025-28ರ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಇದು ನಗರದ ಪತ್ರಿಕಾ ಭವನದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮಗಳವಾರ 1 ಗಂಟೆಗೆ ದೊರೆತ ಮಾಹಿತಿ ಪ್ರಕಾರ ಒಟ್ಟಾರೆಯಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 7 ನಾಮಪತ್ರ, ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ 7, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 4, ಖಜಾಂಜಿ ಸ್ಥಾನಕ್ಕೆ 3, ಉಪಾದ್ಯಕ್ಷ ಸ್ಥಾನಕ್ಕೆ 10, ಕಾರ್ಯದರ್ಶಿ ಸ್ಥಾನಕ್ಕೆ 9, ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 39 ಸೇರಿ ಒಟ್ಟು 79 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಮಲ್ಲಣ್ಣ, ಉಪಚುನಾವಣೆ ಅಧಿಕಾರಿ ಸುರೇಶ ರಡ್ಡಿ ಮಾಹಿತಿ ನೀಡಿದ್ದಾರೆ.