ವಡಗೇರಾ: ನಾಯ್ಕಲ್ ಗ್ರಾಮದ ಬಳಿ ಹೆದ್ದಾರಿ ಮೇಲೆ ನುಗ್ಗಿದ ನದಿ ನೀರು,ಹೆದ್ದಾರಿ ಮೇಲೆ ಮೀನು ಹಿಡಿಯುತ್ತಿರುವ ಜನ
ಯಾದಗಿರಿ ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಯು ಭಾರಿ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದ್ದು, ವಡಿಗೇರ ತಾಲೂಕಿನ ನಾಯ್ಕಲ್ ಗ್ರಾಮದ ಬಳಿಯ ಶಹಾಪುರ ದಿಂದ ಯಾದಗಿರಿ ಹೋಗುವ ಹೆದ್ದಾರಿ ಮೇಲೆ ಭಾರಿ ಪ್ರಮಾಣದಲ್ಲಿ ನದಿಯ ನೀರು ನುಗ್ಗಿದ್ದರಿಂದ ವಾಹನ ಸವಾರರು ಜೀವ ಭಯದಲ್ಲಿಯೇ ಓಡಾಟ ನಡೆಸುವಂತಹ ಸ್ಥಿತಿ ಕಂಡು ಬಂದಿದೆ. ಹೆದ್ದಾರಿ ಮೇಲೆಯೇ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಗ್ರಾಮಸ್ಥರು ಮೀನು ಹಿಡಿಯಲು ಮುಂದಾಗಿರುವ ದೃಶ್ಯವೂ ಕೂಡ ಕಂಡು ಬಂದಿದೆ. ನಾಯ್ಕಲ್ ಗ್ರಾಮದಲ್ಲಿ ನೀರು ಹೊಕ್ಕು ಮನೆಗಳಲ್ಲಿ ನೀರು ನುಗುತ್ತಿರುವುದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.