ಬೀಳಗಿ: ಈರುಳ್ಳಿ ಬೆಲೆ ಕುಸಿದ ಬೀಳಗಿ ಭಾಗದ ರೈತರು ಕಂಗಾಲು,ಮನ್ನಿಕೇರಿಯಲ್ಲಿ ಈರುಳ್ಳಿ ಮಣ್ಣಲ್ಲಿ ಮುಚ್ಚಿ ರೈತರ ಕಣ್ಣೀರು
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ರೈತ ದ್ಯಾಮಣ್ಣ ಗಡ್ಡಿ ಇವರಿಗೆ ಸೇರಿದ ಮನ್ನಿಕೇರಿ ಗ್ರಾಮದಲ್ಲಿರುವ ಸರ್ವೆ ನಂ 225 ರ ಲ್ಲಿರುವ ನಾಲ್ಕು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು.ಈಗ ಬೆಲೆ ಕುಸಿದಿದ್ದರಿಂದ ಕಟಾವು ಮಾಡಿ ಮಾರಾಟ ಮಾಡಲು ಖರ್ಚು ವೆಚ್ಚಗಳು ಸರಿ ದೂಗುವುದಿಲ್ಲವೆಂದು ಮಣ್ಣಲ್ಲೇ ಈರುಳ್ಳಿ ಮುಚ್ಚುತ್ತಿದ್ದಾರೆ.ಕಟಾವು ಮಾಡಿದರೂ ಕೂಲಿ ಕಾರ್ಮಿಕರ ಕೂಲಿ ದುಡ್ಡು ಕೂಡ ಕೊಡಲು ಸಾಧ್ಯವಾಗುವುದಿಲ್ಲ.ಹೀಗಾಗಿ ರೈತರು ಮಣ್ಣಲ್ಲೇ ಈರುಳ್ಳಿ ಮುಚ್ಚಿ ಭೂಮಿ ಹದ ಮಾಡುತ್ತಿದ್ದಾರೆ.ಅತೀವೃಷ್ಠಿ ಬೆಳೆ ಹಾಳಾಗಿದ್ದು,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯ ರೈತ ಗುರಿಲಿಂಗಪ್ಪ ಗಡ್ಡಿ ಒತ್ತಾಯಿಸಿದ್ದಾರೆ.