ರಾಯಚೂರು: ರೋಗ ಹರಡುವ ಕೇಂದ್ರವಾದ ರಾಯಚೂರು ಬಸ್ ನಿಲ್ದಾಣ
ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎನ್ನುವುದು ಮಾಯವಾಗಿದೆ ನಿರ್ವಹಣೆ ಎನ್ನುವುದು ಮರೀಚಿಕೆಯಾಗಿದೆ. ಸೋಮವಾರ 4 ಗಂಟೆಗೆ ಬಸ್ ನಿಲ್ದಾಣದಲ್ಲಿನ ಪರಿಸ್ಥಿತಿ ಇದಾಗಿದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಎನ್ನುವುದು ಮಾಯವಾಗಿದೆ ಕೆಸರು ಚರಂಡಿ ನೀರು ತುಂಬಿದ್ದು ಸೊಳ್ಳೆಗಳು ಹೆಚ್ಚಾಗಿ ಬರುವ ಪ್ರಯಾಣಿಕರಿಗೆ ರೋಗ ಹರಡುವ ಕೇಂದ್ರದಂತೆ ಕಾಣುತ್ತಿದೆ. ನಿಲ್ದಾಣದ ನಿರ್ವಹಣೆ ಸರಿಯಾಗಿಲ್ಲ ಎಂದು ಪ್ರಯಾಣಿಕರು ಗೊಣಗುತ್ತಾಮುಂದಿನ ಊರಿಗೆ ಸಾಗುತ್ತಿದ್ದಾರೆ. ಇನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.