ಕಡೂರು: ಗಣಪತಿ ಗಲಾಟೆ, ಪೊಲೀಸರಿಂದ ಮಹಾ ಎಡವಟ್ಟು.! ನಡು ರಸ್ತೆಯಲ್ಲೇ ಗಣಪತಿ ಏಕಾಂಗಿ, ಆಗಿದ್ದೇನು ಅಂತೀರಾ.
ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ಡಿಜೆ, ಸೌಂಡ್ ಸಿಸ್ಟಮ್ ಹಾಗೂ ವಾದ್ಯಗೋಷ್ಠಿಗೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಗಣಪತಿ ಮೂರ್ತಿಯನ್ನು ಟ್ರ್ಯಾಕ್ಟರ್ ಮೇಲೆ ಏಕಾಂಗಿಯಾಗಿ ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದಿದೆ. ಬೀರೂರು ಪಟ್ಟಣದಲ್ಲಿ ನಿನ್ನೆ ರಾತ್ರಿ ಆರಂಭವಾಗಿದ್ದ ಗಣಪತಿ ವಿಸರ್ಜನಾ ಮೆರವಣಿಗೆಗೆ ಪೊಲೀಸರು ಡಿಜೆಗೆ ಅನುಮತಿಯನ್ನು ಕೊಟ್ಟಿದ್ದು ಶುಕ್ರವಾರ ಬೆಳಗ್ಗೆ ಅನುಮತಿಯನ್ನು ನಿರಾಕರಿಸಿದ್ದೇವೆ ಡಿಜೆಯನ್ನು ಆಫ್ ಮಾಡಿ ಎಂದು ಹಾಗೂ ಮೆರವಣಿಗೆಗೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ಮಾರ್ಗದ ಕ್ಯಾಂಪ್ ಬಳಿ ಗಣಪತಿಯನ್ನ ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರು.