ಬೈಲಹೊಂಗಲ: ಸಿಎಂ ಎಚ್ಚೆತ್ತಕೊಳ್ಳದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ: ನೇಸರ್ಗಿ ಗ್ರಾಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ
ಸಿಎಂ ಎಚ್ಚೆತ್ತಕೊಳ್ಳದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಮತ್ತು ಇದು ಇನ್ನಷ್ಟು ಹೆಚ್ಚಾಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶುಕ್ರವಾರ ಕಿತ್ತೂರು ತಾಲೂಕಿನ ನೆಸರಗಿ ಹೊಬಳಿ ಮದನಭಾವಿ ಗ್ರಾಮದಲ್ಲಿ ಸೋಯಾಬಿನ್ ಬೆಳೆ ಹಾನಿ ಸಮೀಕ್ಷೆ ನಡೆಸಿದ ಬಳಿಕ ಮಾತನಾಡಿ, ಸೋಯಾಬಿನ್ ಬೆಳೆ ನಾಶ ಹಾಗೂ ಮಳೆಯಿಂದಾದ ಬೆಳೆ ಹಾನಿಯಾದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ ಮತ್ತು ಮುಖ್ಯಮಂತ್ರಿಗಳು ಎಲ್ಲ ಕೆಲಸ ಬದಿಗೊತ್ತಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಹೇಳಿದರು