ಕಾರವಾರ: ಕೆರವಡಿ ಗ್ರಾಪಂ ಆವರಣದಲ್ಲಿ ಭ್ರಷ್ಟಾಚಾರ ನಿರ್ಮೂಲನ ಆಂದೋಲನ ಕಾರ್ಯಕ್ರಮ
ವಿಚಕ್ಷಣ ಜಾಗೃತಿ ಸಪ್ತಾಹ ಸಲುವಾಗಿ ಎನ್.ಪಿ.ಸಿ.ಐ.ಎಲ್ ಕೈಗಾ ವತಿಯಿಂದ ಕೆರವಡಿ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಹಯೋಗದೊಂದಿಗೆ ಬುಧವಾರ ಸಂಜೆ 4ಕ್ಕೆ ಭ್ರಷ್ಟಾಚಾರ ನಿರ್ಮೂಲನ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಿ, ರಾಜನ ಭಾವಿ ಎಂಬ ನಾಟಕವನ್ನು ರಂಗತರಂಗ ತಂಡದ ಮೂಲಕ ಪ್ರಸ್ತುತ ಪಡಿಸಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎನ್.ಪಿ.ಸಿ.ಐ.ಎಲ್ ಕೈಗಾ 3 ಮತ್ತು 4 ಕೇಂದ್ರದ ಮುಖ್ಯ ಅಧೀಕ್ಷಕ ಎ.ಎಲ್.ವಿ ವಿಕ್ರಮ ರೆಡ್ಡಿ, ವಿಜ್ ಲೆನ್ಸ್ ಅಧಿಕಾರಿ ಮುಕೇಶ್, ವಿಶ್ವೇಶ್ವರ ಗಾವಕರ್, ಕೆ. ವೇಣುಗೋಪಾಲ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಮತ್ತು ಗ್ರಾಮದ ಜನತೆ ಪಾಲ್ಗೊಂಡಿದ್ದರು.