ಹೊಸನಗರ: ರಿಪ್ಪನ್ ಪೇಟೆ ಪಟ್ಟಣದಲ್ಲಿ ಸಂಭ್ರಮಾದ ಈದ್ ಮಿಲಾದ್ ಮೆರವಣಿಗೆ
ರಿಪ್ಪನ್ ಪೇಟೆ ಪಟ್ಟಣದಲ್ಲಿ ಭಾನುವಾರ ಸಂಭ್ರಮ ಸಡಗರದಿಂದ ಮುಸ್ಲಿಂ ಬಾಂಧವರು ಈ ಮಿಲಾದ್ ಮೆರವಣಿಗೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಇರುವಂತಹ ಜುಮ್ಮಾ ಮಸೀದಿ ಹಾಗೂ ಮೆಕ್ಕಾ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬವನ್ನ ಸಂಭ್ರಮ ತಡೆಗರದ ಮೆರವಣಿಗೆಯೊಂದಿಗೆ ಆಚರಿಸಿದರು ಮೆರವಣಿಗೆಯಲ್ಲಿ ಮಕ್ಕಳು ತ್ರಿವರ್ಣ ಧ್ವಜವನ್ನ ಹಿಡಿದು ಭಾವೈಕ್ಯತೆಯನ್ನು ಸಾರಿದ್ದಾರೆ.