ಕೊಳ್ಳೇಗಾಲ: ವಾಟರ್ ಮ್ಯಾನ್ ಆತ್ಮಹತ್ಯೆ ಪ್ರಕರಣ ಕೊಳ್ಳೇಗಾಲದಲ್ಲಿ
ನೌಕರರಿಂದ ಮೌನಾಚರಣೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ
ಕೊಳ್ಳೇಗಾಲ: ನಗರದ ಪೌರ ನೀರು ಸರಬರಾಜು ನೌಕರರ ಸಂಘದ ವತಿಯಿಂದ ಇಂದು ಹೊಂಗನೂರು ಗ್ರಾಮ ಪಂಚಾಯಿತಿಯಲ್ಲಿ ನೇಣಿಗೆ ಶರಣಾದ ವಾಟರ್ ಮ್ಯಾನ್ ಚಿಕ್ಕೂಸನಾಯಕ ರವರ ಮರಣಕ್ಕೆ ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ಪುಟ್ಟಮಾದು ಅವರು ಹೊಂಗನೂರು ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಚಿಕ್ಕೂಸನಾಯಕ ಆತ್ಮಹತ್ಯೆಗೆ ಶರಣಾಗಿರುವುದು ತುಂಬಾ ಹೃದಯವಿದ್ರಾವಕ ಘಟನೆ. ಇದು ನೌಕರರ ಮೇಲೆ ಇರುವ ಕಾರ್ಯಭಾರ, ಮಾನಸಿಕ ಒತ್ತಡದ ಪ್ರತಿಬಿಂಬವಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು," ಎಂದು ಆಗ್ರಹಿಸಿದರು. ಅಲ್ಲದೆ ಅಇಂತಹ ದುರ್ಘಟನೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯದಂತೆ ಸರಕಾರ ಗಮನ ಹರಿಸಿ ಎಂದರು