ಕುಕನೂರ: ರೈಲು ಹಳಿಯನ್ನು ಕ್ರಾಸ್ ಮಾಡುವಾಗ ವೇಳೆ ಏಕಾಯಕಿ ರೈಲು ಹರಿದು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಬನ್ನಿಕೊಪ್ಪದಲ್ಲಿ ಸಂಭವಿಸಿದೆ
ರೈಲು ಹಳಿಯನ್ನು ಕ್ರಾಸ್ ಮಾಡುತ್ತಿದ್ದ ವೇಳೆ ಏಕಾಯಕಿ ರೈಲು ಹರಿದು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ರೈಲ್ವೆ ನಿಲ್ದಾಣದ ಹಳಿಯಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಏಳು ಗಂಟೆಗೆ ತಿರುಪತಿ ಕೊಲ್ಲಾಪುರ ರೈಲು ಹರಿದು 70ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ನನಗೆ ಪರಿಹಾರ ಕೊಡಿಸಿ ಎಂದು ಕುರಿಗಳನ್ನ ಕಳೆದುಕೊಂಡ ರೈತ ಅಂಗಾಲಾಚಿದ್ದಾನೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಿರುಗಿ ನೋಡಿಲ್ಲ ಸೆಪ್ಟೆಂಬರ್ 14 ರಂದು ಸಂಜೆ 4-30 ಗಂಟೆಗೆ ಕುರಿ ಕಳೆದುಕೊಂಡ ಕುರಿಗಾರ ತನ್ನ ಅಸಹಾಯಕತೆಯನ್ನು ಮಾಧ್ಯಮಕ್ಕೆ ಹೇಳಿಕೊಂಡಿದ್ದಾನೆ ಕುರಿಗಾಹಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕುರಿಗಾರರ ಸಂಘದವರು ಒತ್ತಾಯಿಸಿದ್ದಾರೆ.