ಲಿಂಗಸೂರು: ಲಿಂಗಸುಗೂರು : ಪೇಮೆಂಟ್ ಆಗಿಲ್ಲ ಎಂದು ದಾರಿ ತಪ್ಪಿಸುತ್ತಿರುವ ಶಾಸಕರು
ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿ ಉಪ ಗುತ್ತಿಗೆ ಪಡೆದು ಕೆಲಸ ಮುಗಿಸಿದ ದೇವದುರ್ಗದ ಉಪಗುತ್ತಿಗೆದಾರರಿಗೆ ಹಣ ನೀಡುವ ಬದಲಿಗೆ ಶಾಸಕರು ಸರ್ಕಾರದಿಂದ ಪೇಮೆಂಟ್ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಮಾನಸಯ್ಯ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎನ್ ಡಿ ವಡ್ಡರ್ ಕಂಪನಿ ಸರ್ಕಾರದಿಂದ ಕಾಲುವೆ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದು ನಿಯಮಭಾಹಿಯವಾಗಿ ಉಪ ಗುತ್ತಿಗೆದಾರರಿಗೆ ಕೆಲಸ ಕೊಟ್ಟು ಅವರು ಮಾಡಿರುವ ಕೆಲಸಕ್ಕೆ ಹಣ ಕೊಡದೆ ಕಾಡಿಸುತ್ತಿದ್ದಾರೆ ಇದು ತಪ್ಪು ಎಂದು ಹೇಳಿದರು.