ಮನರೇಗಾ ವರ್ಸಸ್ ವಿಬಿಜಿ ರಾಮ್ ಜಿ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ಮಹಾತ್ಮಾ ಗಾಂಧಿ ಹೆಸರು ತೆಗೆದಿದ್ದಾರೆ. ಗಾಂಧಿ ಹೆಸರೇ ಇಟ್ಟಿದ್ದಿದ್ರೆ ಇವರ ತಾತನ ಗಂಟೇನಾದ್ರೂ ಹೋಗ್ತಿತ್ತಾ? ಗಾಂಧಿ ಹೆಸರಿನಿಂದ ಏನು ಸಮಸ್ಯೆ ಇವರಿಗೆ? ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ಕೊಂದಿದ್ದು ಆರ್ಎಸ್ಎಸ್ ವ್ಯಕ್ತಿ. ಅದರ ಹಿಂದೆ ಯಾರ್ಯಾರು ಇದ್ದಾರೆ ಅಂತ ಎಲ್ಲರಿಗೂ ಗೊತ್ತು. ನರೇಗಾದಲ್ಲಿ ಭ್ರಷ್ಟಾಚಾರ ನಡೆದಿದ್ರೆ ಇವರು ತನಿಖೆ ಮಾಡಿಸಲಿ ಎಂದರು.