ಶ್ರೀರಂಗಪಟ್ಟಣ: ಪಟ್ಟಣದ ಗುಂಬಸ್ ಷಹೀದ್ ಟಿಪ್ಪು ಎಸ್ಟೇಟ್ ಕಮೀಟಿಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಸೇರಿ ಭಾರಿ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ ಆರೋಪ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗುಂಬಸ್ ನಲ್ಲಿರೋ ಷಹೀದ್ ಟಿಪ್ಪು ಎಸ್ಟೇಟ್ ಕಮೀಟಿಯಲ್ಲಿ ಅಧ್ಯಕ್ಷ ಹಾಗು ಕಾರ್ಯದರ್ಶಿ ಸೇರಿ ಭಾರೀ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ.ಈ ಬಗ್ಗೆ ಸ್ಥಳೀಯ ಮುಸ್ಲಿಂ ಮುಖಂಡರು ಸೇರಿ ಅದೇ ಸಮುದಾಯದ RTI ಕಾರ್ಯಕರ್ತರ ಖಲೀಂ ಉಲ್ಲಾ ಶರೀಫ್ ಕಮೀಟಿ ವಿರುದ್ದ ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಗುಂಬಜ್ ನಲ್ಲಿ ಈ ಷಹೀದ್ ಟಿಪ್ಪು ಕಮೀಟಿಗೆ ಅಧ್ಯಕ್ಷರಾಗಿ ಮೈಸೂರಿನ ಶಾಸಕ ತನ್ವೀರ್ ಸೇಠ್ ಕಾರ್ಯದರ್ಶಿಯಾಗಿ ಇರ್ಫಾನ್ ಕಳೆದ 20 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ.ಈ ವಕ್ಫ್ ಕಮೀಟಿಯ ಬೈಲಾ ಪ್ರಕಾರ ಓರ್ವ ವ್ಯಕ್ತಿ ತಲಾ 3 ವರ್ಷದ ಅವಧಿಗೆ ಎರಡು ಬಾರಿ ಮಾತ್ರ ಕಮೀಟಿಗೆ ಆಯ್ಕೆ ಆಗಿ ಯಾವುದೇ ಅದಿಕಾರ ನಡೆಸಬಹುದಾಗಿದೆ ಎಂದರು.