ಮೂಡಿಗೆರೆ: ಸ್ಕೂಟಿ ಮೇಲೆ ಹತ್ತಿದ ಕ್ರೇನ್, ಅಂಗನವಾಡಿ ಶಿಕ್ಷಕಿ ಸ್ಥಳದಲ್ಲೇ ಸಾವು.! ಹೆಸಗಲ್ ರಸ್ತೆಯಲ್ಲಿ ಭೀಕರ ದುರಂತ.!
ಸ್ಕೂಟಿಯ ಮೇಲೆ ಕ್ರೇನ್ ಹರಿದ ಪರಿಣಾಮ ಕ್ರೀಮ್ ಕೆಳಗೆ ಸಿಲುಕಿದ್ದ ಅಂಗನವಾಡಿಯ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಹೆಸಗಲ್ ಗ್ರಾಮದ ಅಂಗನವಾಡಿ ಶಿಕ್ಷಕಿ 28 ವರ್ಷದ ಸಂಪ್ರೀತಾ ತನ್ನ ಸ್ನೇಹಿತೆಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕ್ರೇನ್ ಸ್ಕೂಟಿಯ ಮೇಲೆ ಹತ್ತಿದ ಪರಿಣಾಮ ಸಂಪ್ರೀತಾ ಸ್ಥಳದಲ್ಲೇ ಮೃತಪಟ್ಟಿದ್ದು ಆಕೆಯ ಸ್ನೇಹಿತೆ ಸುಜಾತಾ ಸ್ಥಿತಿ ಗಂಭೀರವಾಗಿದೆ. ಗಾಯಾಳು ಸುಜಾತಾಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.