ಹಿರಿಯೂರು:ತಾಲೂಕಿನ ಪಟ್ರೇಹಳ್ಳಿ – ಪಿಲಾಲಿ ದಸೂಡಿ ರಸ್ತೆ ಕಿ.ಮೀ. 0.45ರಲ್ಲಿ ನೀರಾವರಿ ಕಾಲುವೆ ಅಡ್ಡಲಾಗಿ ಬಾಕ್ಸ್ ಕಲ್ವರ್ಟ್ ಹಾಗೂ ಅಪ್ರೋಜ್ ರಸ್ತೆ ಕಾಮಗಾರಿಯನ್ನು ಸಚಿವ ಡಿ. ಸುಧಾಕರ್ ಸೋಮವಾರ ಸಂಜೆ 5ಗಂಟೆಗೆ ಉದ್ಘಾಟಿಸಿದರು. ಈ ಕಾಮಗಾರಿಯಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ತಾಲೂಕು ಕಚೇರಿ,ಸಾರ್ವಜನಿಕ ಆಸ್ಪತ್ರೆ ,ತಾಲೂಕು ಪಂಚಾಯಿತಿ ಕಾರ್ಯಕ್ಕೆ ಹಾಗೂ ಗ್ರಾಮೀಣ ಪ್ರದೇಶದ ರಸ್ತೆ ಸಂಪರ್ಕ ಸುಧಾರಣೆಯಾಗಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ವರ್ಷಪೂರ್ತಿ ಸುಗಮ ಸಂಚಾರ ಸಾಧ್ಯವಾಗಲಿದೆ. ಜನರ ದಿನನಿತ್ಯದ ಅಗತ್ಯಗಳಿಗೆ ಸ್ಪಂದಿಸುವಂತೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.