ಔರಾದ್: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದಿಂದ ಕನ್ನಡ ಅರಿವು -ಆಚಾರ ಕಾರ್ಯಕ್ರಮಕ್ಕೆ ಚಾಲನೆ
Aurad, Bidar | Nov 13, 2025 ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ವತಿಯಿಂದ ಬುಧವಾರ ರಾತ್ರಿ ಕನ್ನಡ ಅರಿವು -ಆಚಾರ ಕನ್ನಡಮಯ ಬದುಕಿಗಾಗಿ ಕನ್ನಡ ಶೀರ್ಷಿಕೆ ಅಡಿ ಆಯೋಜಿಸಿದ್ದ ಕಾರ್ಯಕ್ರಮ ರಾತ್ರಿ 11ರ ವರೆಗೆ ನಡೆಯಿತು. ಬಿಇಒ ಬಿ. ಜೆ. ರಂಗೇಶ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಂಢರಿ ಅಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಗಜಾನನ ಮಳ್ಳಾ, ನಿವ್ರತ್ತ ಶಿಕ್ಷಕಿ ಶ್ರೀದೇವಿ ಕೋಟಾಗ್ಯಾಳ, ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಪ್ರಭಾವತಿ ಭಾಲೆಕಾರ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ಮಹಾನಂದಾ ಎಂಡೆ ಪ್ರಾಸ್ತವಿಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಬಿ. ಎಂ. ಅಮರವಾಡಿ ಅಧ್ಯಕ್ಷತೆ ವಹಿಸಿ, ಮಾರ್ಗದರ್ಶನ ನೀಡಿದರು.