ಚಿಟಗುಪ್ಪ: ಪಟ್ಟಣದಲ್ಲಿ ಹಜರತ್ ಖಾಜಾ ಶೇಖ್ ಕರಿಮುಲ್ಲಾ ಶಾಖಾದ್ರಿ ಚಿಸ್ತಿ ಅವರ ಶ್ರದ್ಧಾ ಭಕ್ತಿಯ 65ನೇ ಉರುಸ್
ಪಟ್ಟಣದ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಟ್ಟಣದ ಹೃದಯ ಭಾಗದಲ್ಲಿ ಇರುವ ಹಾಜರಾತ್ ಖಾಜಾ ಶೇಕ್ ಮುಲ್ಲಾ ಶಾಖಾದ್ರಿ ಚಿಸ್ತಿ ಅವರ 65ನೇ ವರ್ಷ ಮಂಗಳವಾರ ರಾತ್ರಿ 11ಕ್ಕೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಮೆರವಣಿಗೆಯಲ್ಲಿ ಪಟ್ಟಣ ಮಾತ್ರವಲ್ಲದೆ ತೆಲಂಗಾಣ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಜನ ಹಿರಿಯ ಧರ್ಮಗುರುಗಳು, ಉತ್ಸವ ಸಮಿತಿಯ ಪ್ರಮುಖ ಪದಾಧಿಕಾರಿಗಳು ಸ್ಥಳೀಯ ಗಣ್ಯರು ಉತ್ಸವಕ್ಕೆ ಸಾಕ್ಷಿಯಾದರು.