ಕೊಳ್ಳೇಗಾಲ: ಕುಣಗಳ್ಳ ದಂಡಿನ ಮಾರಮ್ಮ ದೇವಾಲಯದ ಹುಂಡಿ ಕಳವು: ಕಳ್ಳರು ಹಣ ತೆಗೆದುಕೊಂಡು ಪರಾರಿ
ಕೊಳ್ಳೇಗಾಲ. ತಾಲ್ಲೂಕಿನ ಕುಣಗಳ್ಳಿ ಗ್ರಾಮದ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಹುಂಡಿಯನ್ನು ದುರ್ಷ್ಕಮಿಗಳು ಕಳವು ಮಾಡಿರುವ ಘಟನೆ ಜರುಗಿದೆ. ದೇವಸ್ಥಾನದಲ್ಲಿ ಕಳವು ಮಾಡಿದ್ದ ದುರ್ಷ್ಕಮಿಗಳು ಹುಂಡಿಯಲ್ಲಿದ್ದ ಹಣವನ್ನು ತೆಗೆದುಕೊಂಡು ಕೆರೆ ಪಕ್ಕದ ರಸ್ತೆಯಲ್ಲಿ ಹುಂಡಿಯನ್ನು ಬೀಸಾಡಿ ಹೋಗಿದ್ದಾರೆ. ದೇವಸ್ಥಾನದಲ್ಲಿ ಹುಂಡಿ ಸುಮಾರು 10 ರಿಂದ 15 ಸಾವಿರ ಹಣ ಇರುವುದಾಗಿ ದೇವಸ್ಥಾನ ಆಡಳಿತ ಮಂಡಳಿಯವರು ದೂರು ಸಲ್ಲಿಸಿದ್ದಾರೆ.ವಿಚಾರ ತಿಳಿದ ಎಸ್ಐ ಕರಿಬಸಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಕಳ್ಳರ ಪತ್ತೆಗೆ ಕ್ರಮ ಜರುಗಿಸಿದ್ದಾರೆ.