ಬೆಳಗಾವಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆತ ನಗರದಲ್ಲಿ ದಲಿತ ಸಂಘಟನೆ ಪ್ರತಿಭಟನೆ
ಬೆಳಗಾವಿ ನಗರದಲ್ಲಿ ವಿವಿಧ ದಲಿತಪರ ಸಂಘಟನೆಯಿಂದ ಇಂದು ಶುಕ್ರವಾರ 1 ಗಂಟೆ ಪ್ರತಿಭಟನೆ ನಡೆಸಿದ್ದ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ವ್ಯಕ್ತಿಯನ್ನ ಬಂಧಿಸುವಂತೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದರು ಹಾಗೇಯೆ ದೇಶದಲ್ಲಿ ದಲಿತ ವ್ಯಕ್ತಿ ಉನ್ನತ ಮಟ್ಟದಲ್ಲಿ ಬೆಳೆದಿದ್ದು ಸನಾತನಿಗಳಿಗೆ ಯಾರಿಗೂ ಸಹಿಸಿಕೊಳ್ಳಲಿಕೆ ಆಗುತ್ತಿಲ್ಲಾ ಆದ್ದರಿಂದ ಇಂತಹ ಘಟನೆ ನಡೆದಿದ್ದು ಕೂಡಾ ದುರಾದೃಷ್ಟಕರ ಶೂ ಎಸೆದವರಿಗೆ ಕಾನೂನಿನ ರೀತಿಯಲ್ಲಿ ತಕ್ಕ ಪಾಠ ಕಲಿಸುವಂತಾಗಬೇಕು ಎಂದು ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.