ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರ್ಕಾರದ ಹೆಸರು ಬೆಳೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ರೈತರಿಂದ ಬೆಂಬಲಬೆಲೆ ಯೋಜನೆಯಡಿ ಬೆಳೆಗಳನ್ನು ಖರೀದಿಸಲು ಶಾಸಕರಾದ ಎನ್.ಎಚ್. ಕೋನರಡ್ಡಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷಾದ ಶೇಖರಗೌಡ ಕಬ್ಬೂರ, ಉಪಾಧ್ಯಕ್ಷ ಧರ್ಮಪ್ಪ ಕ ಗಾಣಿಗೇರ, ತಾಲೂಲ ಕೃಷಿಕ ಸಮಾಜದ ಅಧ್ಯಕ್ಷ ಸೋಮಣ್ಣ ಬಳಿಗೇರ, ಸೊಸೈಟಿ ಸದಸ್ಯರಾದ ಈರಪ್ಪ ಕರ್ನಿ, ಮಲ್ಲಿಕಾರ್ಜುನ ಗಾಣಿಗೇರ, ಮಲ್ಲಿಕಾರ್ಜುನ ಪಾಟೀಲ, ಶಿವಶಂಕರಪ್ಪ ಹೂಲಿ, ಅಜ್ಜಪ್ಪ ಮೊರಬ ಸೇರಿದಂತೆ ಉಪಸ್ಥಿತರಿದ್ದರು.