ಬೆಂಗಳೂರು ಉತ್ತರ: ಧರ್ಮಸ್ಥಳ ಪ್ರಕರಣ; ಷಡ್ಯಂತ್ರ ಅಂತ ಹೇಳ್ತಾರೆ ಸುಮುಟೋ ಕೇಸ್ ಹಾಕಲ್ಲ: ನಗರದಲ್ಲಿ ಶಾಸಕ ಭರತ್ ಶೆಟ್ಟಿ
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಭರತ್ ಶೆಟ್ಟಿ ಅವರು, ಡಿಸಿಎಂ ಡಿಕೆ ಶಿವಕುಮಾರ್ ಅವರು, ಷಡ್ಯಂತ್ರ ಇದೆ ಅಂತಾ ಹೇಳ್ತಾರೆ ಅಷ್ಟೇ. ಸುಮುಟೋ ಕೇಸ್ ಹಾಕೋ ಕೆಲಸ ಮಾಡಲ್ಲ. ಬಿಜೆಪಿ ನಾಯಕರು ಏನಾದ್ರೂ ಮಾಡಿದ್ರೆ. ಅವರ ಮೇಲೆ ದೊಡ್ಡ ದೊಡ್ಡ ಕೇಸ್ ಹಾಕ್ತಾರೆ. ಹಿಂದೂಗಳ ಭಾವನೆಗೆ ಧಕ್ಕೆ ಆಗುತ್ತಿದೆ. ಎಲ್ಲರಿಗೂ ಇದು ಗೊತ್ತಿರುವ ವಿಚಾರ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತೆ, ಡಿಸಿಎಂ ಹೇಳ್ತಾರೆ ದೊಡ್ಡ ಷಡ್ಯಂತ್ರ ಇದೆ ಅಂತಾ ಎಂದರು.