ಕಾರ್ತೀಕ ಶುಧ್ಧ ಪೂರ್ಣಿಮೆಯ ಹಿನ್ನೆಲೆ ಮಂತ್ರಾಲಯದ ಪವಿತ್ರ ತುಂಗಭದ್ರಾ ನದಿಯ ತೀರದಲ್ಲಿ ದಿವ್ಯ ತುಂಗಾರತಿ (ಪುನ್ಯ ನದಿ ಆರತಿ) ಮಹೋತ್ಸವ ಭಕ್ತಿ–ಭಾವಪೂರ್ಣವಾಗಿ ನೆರವೇರಿತು. ಮಠ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ನಡೆದ ತುಂಗಾರತಿಯಲ್ಲಿ, ಶ್ರೀಗಳೇ ಸ್ವಯಂ ತುಂಗಾರತಿ ಸಲ್ಲಿಸಿ, ಶ್ರೀ ಪ್ರಹ್ಲಾದರಾಜರ ಉತ್ಸವ ಮೂರ್ತಿಗೆ ಆರತಿ ಸಲ್ಲಿಸಿದರು. ಸಾವಿರಾರು ಭಕ್ತರು ಈ ಒಂದು ತುಂಗಾರತಿಯಲ್ಲಿ ಭಾಗವಹಿಸಿದ್ದರು.