ದೇವದುರ್ಗ: ಕೊತ್ತದೊಡ್ಡಿ ವಸತಿ ಶಾಲೆಯ ಮಕ್ಕಳ ಜೊತೆ ಊಟ ಸೇವಿಸಿ ಕ್ವಾಲಿಟಿ ಚೆಕ್ ಮಾಡಿದ ಸಂಸದ ಜಿ.ಕುಮಾರ ನಾಯಕ
ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಗೆ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಜಿ ಕುಮಾರ ನಾಯಕ ಸೆ.15 ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಶಾಲೆಯ ಮಕ್ಕಳೊಡನೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳೊಂದಿಗೆ ಶಾಲೆಯ ಕುಂದು ಕೊರತೆಗಳನ್ನು ಆಲಿಸಿದರು. ಶಾಲೆಯಲ್ಲಿ ಉತ್ತಮ ಗುಣಮಟ್ಟದ ಬೋಧನೆ ಹಾಗೂ ಮಕ್ಕಳೊಂದಿಗೆ ಸೌಜನ್ಯ ರೀತಿಯಲ್ಲಿ ನಡೆದುಕೊಳ್ಳಿ ಎಂದು ಸೂಚಿಸಿದರು. ಹಾಗೆಯೇ ಅಡುಗೆ ಕೋಣೆಗೆ ತೆರಳಿ ಅಡುಗೆ ಸಿಬ್ಬಂದಿಗಳ ವೇತನ ಹಾಗೂ ಅವರ ತಯಾರಿಕೆಯ ಸಾಮಗ್ರಿಗಳಾದ ತರಕಾರಿ ಆಹಾರ ಧಾನ್ಯಗಳ ಗುಣಮಟ್ಟ ಪರೀಕ್ಷಿಸಿದರು. ತದನಂತರ ಊಟದ ಗುಣಮಟ್ಟವನ್ನು ಪರೀಕ್ಷಿಸಲು ವಿದ್ಯಾರ್ಥಿಗಳೊಡನೆ ಕುಳಿತು ಸಂಸದರು ಊಟ ಸೇವಿಸಿದ