ಶೃಂಗೇರಿ: ನವರಾತ್ರಿ ಕೊನೆ ದಿನದ ಹಿನ್ನೆಲೆ ಪಟ್ಟಣದಲ್ಲಿ ಶಾರದಾಂಬೆಗೆ ಸಂಭ್ರಮದಿಂದ ಬೀದಿ ಉತ್ಸವ
ನವರಾತ್ರಿಯ ಕೊನೆಯ ದಿನವಾದ ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನೆಲೆ ನಿಂತಿರುವ ಶಕ್ತಿ ದೇವತೆ ಭಕ್ತಿ ಪೂರ್ವಕವಾಗಿ ಸಡಗರ, ಸಂಭ್ರಮದಿಂದ ಬೀದಿ ಉತ್ಸವವನ್ನು ನೆರವೇರಿಸಲಾಯಿತು. ಪ್ರತಿದಿನವೂ ಒಂದೊಂದು ಭಾಗದ ಜನರು ಶಾರದಾಂಬೆಗೆ ಪೂಜೆಯನ್ನು ಸಲ್ಲಿಸಿ ಉತ್ಸವವನ್ನು ನಡೆಸುತ್ತಿದ್ದರು. ಕೊನೆಯ ದಿನವಾದ ಇಂದು ಕಿಗ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಜನರು ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದು ರಾತ್ರಿ 8 ಗಂಟೆಯ ಬಳಿಕ ಬೀದಿ ಉತ್ಸವವನ್ನು ನೆರವೇರಿಸಿದರು.