ರಾಯಚೂರು: ವಿಕಲಚೇತನರ ಅಭಿವೃದ್ಧಿಗಾಗಿ ಶೇ.5ರಷ್ಟು ಅನುದಾನ ಮೀಸಲಿಡಲು ಮಾನ್ವಿ ಪಟ್ಟಣದಲ್ಲಿ ಶಾಸಕ ಜಿ ಹಂಪಯ್ಯ ನಾಯಕರಿಗೆ ವಿಕಲಚೇತನರ ಸಮಿತಿ ಮನವಿ
ವಿಕಲಚೇತನರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಶೇ ಹೈದರಷ್ಟು ಅನುದಾನ ಮಂಜೂರು ಮಾಡುವಂತೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶಾಸಕ ಜಿ ಹಂಪಯ್ಯ ನಾಯಕ ಅವರಿಗೆ ಕರ್ನಾಟಕ ರಾಜ್ಯ ವಿಕಲಚೇತನರ ಆರ್ ಪಿ ಡಿ ಟಾಸ್ಕ್ ಫೋರ್ಸ್ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿ ಆಗ್ರಹಿಸಿದರು. ಬುಧವಾರ ಮಧ್ಯಾಹ್ನ ಮನವಿ ಸಲ್ಲಿಸಿದ ವಿಕಲಚೇತನರ ಮನವಿ ಸ್ವೀಕರಿಸಿದ ಶಾಸಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.