ಚಿಂಚೋಳಿ: ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು
ಕಲಬುರಗಿ : ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಮಿರಿಯಾಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿರೋ ಘಟನೆ ನಡೆದಿದ್ದು, ಈ ಬಗ್ಗೆ ಅ26 ರಂದು ಸಂಜೆ 5 ಗಂಟೆಗೆ ಮಾಹಿತಿ ಲಭ್ಯವಾಗಿದೆ.. 15 ವರ್ಷದ ಬಾಲಕಿ ಗ್ರಾಮವೊಂದರ ಕಲ್ಲು ಗಣಿಗಾರಿಕೆ ಪಾಲಿಶ್ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ತಂದೆಗೆ ಅಡುಗೆ ಮಾಡಿಕೊಡ್ತಾ ಅಲ್ಲೆ ವಾಸ ಮಾಡ್ತಿದ್ದಳು. ಈ ವೇಳೆ ಕಲ್ಲು ಗಣಿಗಾರಿಕೆ ಮಾಲೀಕ ಸದ್ದಾಂ ಎಂಬಾತ ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿದಾನೆಂದು ಆರೋಪಿಸಿ ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..